KSCCF Recruitment 2026 : ರಾಜ್ಯ ಸಹಕಾರಿ ಮಂಡಳಿಯಲ್ಲಿ ಸರ್ಕಾರಿ ಉದ್ಯೋಗ | 60,000 ಸಂಬಳ.
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಲದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅದಿಸೂಚನೆ ಬಿಡುಗಡೆ ಮಾಡಿದೆ. ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ 34 ಹುದ್ದೆಗಳು ಖಾಲಿ ಇವೆ.ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ಫೆಬ್ರವರಿ 07 ಕೊನೆಯ ದಿನ.
KSCCF Recruitment 2026 ಹುದ್ದೆಗಳ ವಿವರ.
| ಫಾರ್ಮ ಸಿಸ್ಟ್ | 07 ಹುದ್ದೆಗಳು |
| ಪ್ರಥಮ ದರ್ಜೆ ಗುಮಾಸ್ಥರು | 10 ಹುದ್ದೆಗಳು |
| ವಿಕ್ರಯ ಸಹಾಯಕರು | 16 ಹುದ್ದೆಗಳು |
| ವಿಕ್ರಯ ಸಹಾಯಕರು | 01 ಹುದ್ದೆ |
ವಯೋಮಿತಿ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ವಯೋಮಿತಿ ಹೊಂದಿರಬೇಕು.
ಸಾಮಾನ್ಯ ಅಭ್ಯರ್ಥಿಗಳಿಗೆ – 38 ವರ್ಷ ಮೀರಬಾರದು.
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – 41 ವರ್ಷ.
ಪರಿಶಿಷ್ಟ ಜಾತಿ / ಪಂಗಡ ಅಭ್ಯರ್ಥಿಗಳಿಗೆ – 43 ವರ್ಷ.
ಅರ್ಜಿ ಶುಲ್ಕ
ಅರ್ಜಿ ಸಲ್ಲಿಸಲು ಈ ರೀತಿಯ ಶುಲ್ಕ ನಿಗದಿ ಮಾಡಲಾಗಿದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ -1000 ರೂ
ಹಿಂದುಳಿದ ಮತ್ತು Sc/St ಅಭ್ಯರ್ಥಿಗಳಿಗೆ -500 ರೂ
ವಿದ್ಯಾರ್ಹತೆ
ಆಯಾ ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಹತೆ ನಿಗದಿಪಡಿಸಿದೆ.
1.ಫಾರ್ಮ ಸಿಸ್ಟ್
✅ Diploma in pharmacy ಪರೀಕ್ಷೆಯಲ್ಲಿ ಪಾಸಾಗಿರಬೇಕು.
✅ ಕಂಪ್ಯೂಟರ್ ಆಪರೇಟ್ ಮಾಡುವ ಜ್ನ್ಯಾನ ಹೊಂದಿರಬೇಕು.
✅ ಕನ್ನಡ, ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು.
2.ಪ್ರಥಮ ದರ್ಜೆ ಗುಮಾಸ್ಥರು.
✅ ಯಾವುದೇ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು.
✅ ಕಂಪ್ಯೂಟರ್ ಜ್ನ್ಯಾನ ಹೊಂದಿರಬೇಕು.
✅ ಕನ್ನಡ ಓದಲು ಮತ್ತು ಬರೆಯಲು ಬರಬೇಕು.
3.ವಿಕ್ರಯ ಸಹಾಯಕರು.
✅ ದ್ವಿತೀಯ ಪಿ.ಯು.ಸಿ ಪಾಸಾಗಿರಬೇಕು.
✅ ಕಂಪ್ಯೂಟರ್ ಜ್ನ್ಯಾನ ಹೊಂದಿರಬೇಕು.
✅ ಕನ್ನಡ ಓದಲು ಬರೆಯಲು ಮತ್ತು ಮಾತನಾಡಲು ಬರಬೇಕು.
ಅರ್ಜಿ ಸಲ್ಲಿಸುವುದು ಹೇಗೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
✅ ಅಭ್ಯರ್ಥಿಯು kcssf ನ ವೆಬ್ಸೈಟ್ https://virtualofficeerp.com/ksccf2026 ಗೆ ಭೇಟಿ ನೀಡಬೇಕು. ಅಲ್ಲಿ recruitment ವಿಭಾಗ ಆಯ್ಕೆ ಮಾಡಿ.new registration button ಆಯ್ಕೆ ಮಾಡಿ.
✅ ಮುಂದಿನ ಹಂತದಲ್ಲಿ ಅಭ್ಯರ್ಥಿ ತಮ್ಮ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಬೇಕು.
✅ ನಿಮ್ಮ ಪಾಸ್ ಪೋರ್ಟ್ ಫೋಟೋ ಮತ್ತು ಸಹಿ ಸ್ಕ್ಯಾನ್ ಮಾಡಬೇಕು. ನಂತರ ಅಪ್ಲೋಡ್ ಮಾಡಬೇಕು.
✅ ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕ್ , ಡೆಬಿಟ್ ಕಾರ್ಡ್ , ಮತ್ತು Upi ಮೂಲಕ ಪಾವತಿ ಮಾಡಬೇಕು.
✅ ಎಲ್ಲ ಪ್ರಕ್ರಿಯೆ ಮುಗಿದ ನಂತರ ಅರ್ಜಿ ಪ್ರಿಂಟ್. ಔಟ್ ತೆಗೆದು ಕೊಳ್ಳಿ.