ದಿನದಲ್ಲಿ ಎಷ್ಟು ನೀರು ಕುಡಿಯಬೇಕು? ತುಂಬಾ ಜನಕ್ಕೆ ನೀರು ಕುಡಿಯುವ ವಿಧಾನ ಗೊತ್ತಿಲ್ಲ.
ದಿನದಲ್ಲಿ ಎಷ್ಟು ನೀರು ಕುಡಿಯಬೇಕು ಎಂಬ ಗೊಂದಲವಿದೆಯೇ..? ಈಗ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು,ಸರಿಯಾದ ಸಮಯ ಯಾವುದು ಅನ್ನುವುದರ ಬಗ್ಗೆ ತಿಳಿಯೋಣ.
ನಮ್ಮ ಜೀವನದಲ್ಲಿ ನೀರು ಅತ್ಯವಶ್ಯಕ ಅಂಶವಾಗಿದೆ.ನಮ್ಮ ದೇಹದಲ್ಲಿ ಸುಮಾರು 60 -70% ನೀರು ಸೇರಿದೆ.ಆದರೆ ಹೆಚ್ಚಿನ ಜನರು ನೀರನ್ನು ಸರಳವಾಗಿ ಪರಿಗಣಿಸುತ್ತಾರೆ.ಯಾವುದೆ ನಿಯಮಗಳು ಇಲ್ಲದೆ ಕುಡಿಯುತ್ತಾರೆ. ಇದರಿಂದ ದೀರ್ಘ ಕಾಲದ ಸಮಸ್ಯೆಗಳು ಉಂಟಾಗುತ್ತವೆ.ನೀವು ಒಂದು ವೇಳೆ ನೀರು ಕುಡಿಯುವ ಪ್ರಮಾಣ, ಸಮಯ, ವಿಧಾನ ತಿಳಿದು ಕೊಂಡರೆ, ದೇಹದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಭಹುದು.
ನಮಗೆ ನೀರು ಎಷ್ಟು ಅವಶ್ಯಕ.
ನಮ್ಮ ದೇಹದ ಎಲ್ಲಾ ಅಂಗಗಳಿಗೂ ನೀರು ತುಂಬಾ ಅತ್ಯವಶ್ಯಕವಾಗಿದೆ.ಜೀರ್ಣ ಕ್ರಿಯೆ, ಚಯಾಪಯ ಕ್ರಿಯೆ,ವಿಷಕಾರಿ ಪದಾರ್ಥ ಗಳ ನಿವಾರಣೆ,ಮತ್ತು ಶರೀರದ ಉಷ್ಣತೆಯನ್ನು ನಿಯಂತ್ರಣ ಮಾಡುತ್ತದೆ.ನೀರಿನ ಕೊರತೆ ಇದ್ದರೆ, ದೇಹವು ಡಿ ಹೈ ಡ್ರೆಸನ್ ಆಗುತ್ತದೆ.ಇದರಿಂದ ತಲೆ ನೋವು, ದಣಿವು ಮಲಬದ್ಧತೆ,ಚರ್ಮದ ಸಮಸ್ಯೆಗಳು ಉಂಟಾಗುತ್ತವೆ.
ದಿನಕ್ಕೆ ಎಷ್ಟು ಪ್ರಮಾಣದ ನೀರು ಕುಡಿಯಬೇಕು.
ಸಾಮಾನ್ಯವಾಗಿ ದಿನಕೆ 8-10 ಗ್ಲಾಸ್ ನೀರು ಕುಡಿಯಬೇಕು ಎಂದು ಸಲಹೆ ನೀಡಲಾಗುತ್ತದೆ.ಇದು ವ್ಯಕ್ತಿಯ ಚಟುವಟಿಕೆ,ತೂಕ ಮತ್ತು ಅರೋಗ್ಯದ ಮೇಲೆ ಅವಲಂಬಿತ ವಾಗಿರುತ್ತದೆ.
• ವ್ಯಾಯಾಮ ಮಾಡುವವರು ಹೆಚ್ಚು ನೀರು ಕುಡಿಯಬೇಕು.
• ಬಿಸಿ ವಾತಾವರಣದಲ್ಲಿ ನೀರಿನ ಬಳಕೆ ಹೆಚ್ಚು ಮಾಡಬೇಕು.
• ಗರ್ಭಿಣಿ ಮಹಿಳೆಯರು ಮತ್ತು ಸ್ಥನ್ಯ ಪಾನ ಮಾಡುವವರು ಹೆಚ್ಚು ನೀರು ಕುಡಿಯಬೇಕು.
ನೀರು ಕುಡಿಯುವ ಸರಿಯಾದ ವಿಧಾನ.
1.ಕುಳಿತು ಕೊಂಡು ನೀರನ್ನು ನಿಧಾನವಾಗಿ ಕುಡಿಯಬೇಕು.
• ನಿಂತು ಕೊಂಡು ನೀರು ಕುಡಿಯುವುದು ಕೀಳುಗಳಿಗೆ ಹಾನಿಕರಕ.
• ನಿದಾನವಾಗಿ ಸಿಪ್ ಮಾಡಿ ನೀರು ಕುಡಿಯುವುದು ಜೀರ್ಣ ಕ್ರಿಯೆಗೆ ಸಹಾಯಕಾರಿ.
2.ಬೆಚ್ಚಗಿನ ನೀರು .
• ತಣ್ಣೀರು ಜೀರ್ಣ ಕ್ರಿಯೆಯನ್ನು ನಿದಾನ ಗೊಳಿಸುತ್ತದೆ.
• ಬೆಚ್ಚಗಿನ ನೀರು ಜೀರ್ಣ ಕ್ರಿಯೆ ಹೆಚ್ಚಿಸುತ್ತದೆ.
3.ಒಮ್ಮೆಲೇ ಹೆಚ್ಚು ನೀರು ಕುಡಿಯಬೇಡಿ.
• ಒಂದೇ ಸಮಯದಲ್ಲಿ 1 ರಿಂದ 2 ಗ್ಲಾಸ್ ನೀರು ಕುಡಿಯುವುದರಿದ ಮೂತ್ರ ಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ.
ಯಾವಾಗ ನೀರು ಕುಡಿಯಬೇಕು ಮತ್ತು ಕುಡಿಯಬಾರದು.
1.ಕುಡಿಯಬೇಕಾದ ಸಮಯ
• ಬೆಳಿಗ್ಗೆ ಖಾಲಿ ಹೊಟ್ಟೆಗೆ 2 ರಿಂದ 3 ಗ್ಲಾಸ್ ನೀರು..
• ಊಟದ 45 ನಿಮಿಷಗಳ ಮೊದಲು ಅಥವಾ ನಂತರ.
• ವ್ಯಾಯಾಮದ ನಂತರ.
2.ನೀರು ಕುಡಿಯಬಾರದ ಸಮಯ.
• ಊಟದ ನಂತರ.
• ಹಣ್ಣುಗಳನ್ನು ತಿಂದ ನಂತರ
•ರಾತ್ರಿ ಹಾಸಿಗೆಗೆ ಹೋಗುವ ಮುನ್ನ.
ಯಾವ ಪಾತ್ರೆಯಲ್ಲಿ ನೀರು ಸಂಗ್ರಹಣೆ ಮಾಡಬೇಕು.
• ತಾಮ್ರಾದ ಬಾಟಲಿ ರೋಗ ನಿರೋದಕ ಶಕ್ತಿ ಹೆಚ್ಚಿಸುತ್ತದೆ.
• ಬೆಳ್ಳಿ ಪಾತ್ರೆಯಲ್ಲಿ.
• ಮಣ್ಣಿನ ಮಡಿಕೆಯಲ್ಲಿ
• ಗಾಜಿನ ಬಾಟಲಿ.
ನೀರಿನ ಕೊರತೆಯ ಲಕ್ಷಣಗಳು.
• ಬಾಯಿ ಒಣಗುವುದು.
• ತಲೆ ನೋವು ಮತ್ತು ದಣಿವು.
• ಚರ್ಮ ಒಣಗಿದ್ದು ಸವದಂತೆ ಕಾಣುವುದು.
ತೂಕ ಕಡಿಮೆ ಮಾಡಲು ನೀರು ಹೇಗೆ ಸಹಾಯ ಮಾಡುತ್ತದೆ.
• ನೀರು ಚಯಾಪಯ ಕ್ರಿಯೆಯನ್ನು ವೇಗವಾಗಿಸುತ್ತದೆ.
• ಊಟದ ಮೊದಲು ನೀರು ಕುಡಿದರೆ, ಹೆಚ್ಚು ತಿನ್ನುವುದು ತಪ್ಪಿಸಬಹುದು.
• ದೇಹದ ವಿಷಕಾರಿ ಪದಾರ್ಥಗಳನ್ನು ಹೊರ ಹಾಕುತ್ತದೆ.
ನೀರು ಕುಡಿಯುವುದು ಸರಳವಾದ ಕ್ರಿಯೆಯಾಗಿ ಕಾಣುವುದು.ಆದರೆ ಅದರ ಸರಿಯಾದ ಬಳಕೆ ಅರೋಗ್ಯದ ರಹಸ್ಯ, ಸರಿಯಾದ ಸಮಯ, ವಿಧಾನ, ಪ್ರಮಾಣದಲ್ಲಿ ನೀರು ಕುಡಿದರೆ, ದೀರ್ಘಕಾಲದ ಅರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು.ಇಂದಿನಿಂದಲೇ ಈ ಸಲಹೆಗಳನ್ನು ಅನುಸರಿಸಿ.